Sevanthige Chandinantha muddu koLi
ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ (2)
ಅಮ್ಮನಿತ್ತದೇ ಅಮೃತ ಎನುವ ಕೋಳಿ (2)
ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ
ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ
ತಾಯಿ ತೊರೆದು ಘಳಿಗೆ ಕೂಡ ಅಗಲಾಲಾರದು
ತನ್ನ ಸೋದರರ ಮರೆತು ಬಿಟ್ಟು ಮೆರೆಯಲಾರದು (2)
ಜಾಣ ಮರಿ ಮುದ್ದು ಕೋಳಿ ಮಾತನಾಡದು (2)
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು......
ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ
ಪ್ರೇಮವಿರುವ ಮನೆಯದುವೆ ನಿತ್ಯ ಸುಂದರ
ಆ ಪ್ರೇಮಭರಿತ ಹೃದಯವದು ದೇವ ಮಂದಿರ (2)
ದೇವನವನೆ ಪ್ರೇಮರೂಪ ದಯಾಸಾಗರ (2)
ಆ ದೈವರಕ್ಷೆ ಕಾವುದೆಲ್ಲ ಪ್ರೇಮಜೀವರ.......
ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡು ಬಿಟ್ಟ ಮುದ್ದು ಕೋಳಿ (2)
Comments
Post a Comment