Bhavageethe - Onde baari nanna noDi
ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಹಂಗಾ ಹೋದ ಹಿಂದ ನೋಡದ
ಗೆಳತಿ.. ಹಿಂದಾ ನೋಡದ..
ಮುಂದ ಮುಂದ ಮುಂದ ಹೋದ ಹಿಂದ ನೋಡದ
ಗೆಳತಿ.. ಹಿಂದ ನೋಡದ..
ಹಿಂದ ನೋಡದ ಗೆಳತೀ.. ಹಿಂದಾ ನೋಡದ
ಗಾಳಿ ಹೆಜ್ಜಿ ಹಿಡದ ಸುಗಂದ ಅತ್ತ ಅತ್ತ ಹೋಗು ಅಂದ
ಗಾಳಿ ಹೆಜ್ಜಿ ಹಿಡದ ಸುಗಂದ ಅತ್ತ ಅತ್ತ ಹೋಗು ಅಂದ
ಹೋದ ಮನಸು ಅವನ ಹಿಂದ, ಹಿಂದ ನೋಡದ
ಗೆಳತೀ.. ಹಿಂದ ನೋಡದ
ಹೋದ ಮನಸು ಅವನ ಹಿಂದ, ಹಿಂದ ನೋಡದ
ಗೆಳತೀ.. ಹಿಂದ ನೋಡದ
ಹಿಂದ ನೋಡದ ಗೆಳತೀ.. ಹಿಂದಾ ನೋಡದ
ನಂದ ನನಗ ಎಚ್ಚಾರಿಲ್ಲ ಮಂದಿ ಗೊಡವಿ ಏನಾ ನನಗ
ನಂದ ನನಗ ಎಚ್ಚಾರಿಲ್ಲ ಮಂದಿ ಗೊಡವಿ ಏನಾ ನನಗ
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ
ಗೆಳತೀ.. ಹಿಂದ ನೋಡದ
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ
ಗೆಳತೀ.. ಹಿಂದ ನೋಡದ
ಹಿಂದ ನೋಡದ ಗೆಳತೀ.. ಹಿಂದಾ ನೋಡದ
ಸೂಜಿ ಹಿಂದ ದಾರದಾಂಗ, ಕೊಳ್ಳದೊಳಗ ಜಾರಿದಾಂಗ
ಸೂಜಿ ಹಿಂದ ದಾರದಾಂಗ, ಕೊಳ್ಳದೊಳಗ ಜಾರಿದಾಂಗ
ಹೋದ ಹಿಂದ ಬಾರದಾಂಗ.. ಹಿಂದ ನೋಡದ
ಗೆಳತೀ.. ಹಿಂದ ನೋಡದ
ಹೋದ ಹಿಂದ ಬಾರದಾಂಗ.. ಹಿಂದ ನೋಡದ
ಗೆಳತೀ.. ಹಿಂದ ನೋಡದ
ಹಿಂದ ನೋಡದ ಗೆಳತೀ.. ಹಿಂದಾ ನೋಡದ
ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ
ಗೆಳತಿ.. ಹಿಂದ ನೋಡದ..
ಹಿಂದ ನೋಡದ ಗೆಳತೀ.. ಹಿಂದಾ ನೋಡದ
Very nice. Thanks for lyrics.
ReplyDelete