Raajaratha - HeLe Meghave

ರಾಜರಥ : ಹೇಳೆ ಮೇಘವ

ಹೇಳೆ ಮೇಘವೆ ಓಡುವೇ ಹೆ.. ಹೆ.. ಹೆ.. ಹೀಗೆ ಏತಕೆ
ನನ್ನ ನೋಡದೆ ಹೋಗುವೆ ಹೆ.. ಹೆ.. ಹೆ.. ಹೀಗೆ ಏತಕೆ

ಹೀ..ಗೇಕೆ ಕಾದೆ ನೀ ಮುಂಗಾರಿಗಾಗೆ
ನಾ ನಿನ್ನ ಹಿಂದೆ ಸಾಗೊ ಅಲೆಮಾರಿ ಎಂತಾದರು
ನನ್ನನು ನೀನೆಕೆ ಹೀಗೆ ಮರೀಚಿಕೆ ಹಾಗೆ
ಕಣ್ಣಲಿದ್ದರು ಸಿಗದೆಯೇ ಕಾಡುವೆ
ಕಾ..ಮನಾ.. ಬಿಲ್ಲಿನಲ್ಲೂ ಕಾಣದ ಬಣ್ಣ ನೀನೆ
ಮತ್ತೆ ಸೇರದೆ ಕಾಡುವೆ ಹೆ.. ಹೆ.. ಹೆ.. ಹೀಗೆ ಏತಕೆ
ಹೇಳೆ ಮೇಘವೆ

ಹತ್ತಿರ.. ನನ್ನ ಜೊತೆಯಲೆ ಇರಬೇಕು ನೀನು ಎಂದು ನಾನು ಕೇಳಿಕೊಂಡೆ
ಸೂರ್ಯನ ಕಿರಣ ತಾಕಿ ನೀ ಮೇಲೆಲ್ಲೋ ಬಾನಿನಲ್ಲಿ ಹೋಗಿ ಸೇರಿಕೊಂಡೆ
ನೀ ದೂರವೇ ಇದ್ದರೂ ನಿನ್ನನು ನಾ ನೋಡುವೆ ಮುಚ್ಚದೆ ಕಣ್ಣನು
ನೀನೇನಂದರೂ.. ನಾ ನಿನ್ನ ಬಿಟ್ಟು ಇನ್ನು ಎಲ್ಲಿ ಹೋಗುವೆ
ಇಡೀ ವರ್ಷವೂ ನಾನಿಲ್ಲೇ ನಿಂತು ನಿನ್ನ ದಾರಿ ಕಾಯುವೆ
ನಾ ಬಾ ಹತ್ತಿರ ಎಂದಾಗ ದೂಡುವೆ ನಾನೊಂದು ಕ್ಷಣಕು ನಿನ್ನ ಬಿಟ್ಟು ದೂರ ಹೋದರೆ
ನೊಡುವೆ ಹೆ.. ಹೆ.. ಹೆ.. ಹೀಗೆ ಏತಕೆ
ಹೇಳೆ ಮೆ..ಘ..ವೆ

ಹಗಲಿನಲ್ಲಿ ಬಗಲಿನಲ್ಲಿ ಇದ್ದ ನಿನ್ನ ನೇಸರ
ಇರುಳಿನಲ್ಲಿ ದೂರವಾದಾಗ ಮೂಡಿ ಬೇಸರ
ನಿನ್ನ್ ಕಣ್ಣಿನಿಂದ ಹರಿದ ಕಂಬನಿ ನನ್ನ ಬಂದು ಸೇರಿತಾಗ ಸವಿಯ ಇಬ್ಬನಿ
ನೀ ನನ್ನ ಕೈಗೆ ಎಟುಕದಿರುವ ಮಾಯಗಾತಿ ಗಗನ ಕುಸುಮ ಕಣ್ಣ ಹಾನಿಯು ಒಂದೇ ಸಾಕು ದಿನವ ಕಳೆಯಲು
ಇಬ್ಬನೀ.. ತಬ್ಬಿದಾಗ ಸುರಿದು ಬಂತೂ.. ಪ್ರೀತಿ ಸೂನೆ
ಕೇಳೆ ಮೇಘವೇ..

Singer: Abhay Jodhpurkar
Music & Lyrics: Anup Bhandari

Comments

Popular posts from this blog

Bhavageethe - Onde baari nanna noDi

ಪುಣ್ಯಕೋಟಿ ಕಥೆ

Shivalinga Poojisayya ( ಶಿವಲಿಂಗ ಪೂಜಿಸಯ್ಯ )