Posts

Showing posts from March, 2018

Raajaratha - HeLe Meghave

ರಾಜರಥ : ಹೇಳೆ ಮೇಘವ ಹೇಳೆ ಮೇಘವೆ ಓಡುವೇ ಹೆ.. ಹೆ.. ಹೆ.. ಹೀಗೆ ಏತಕೆ ನನ್ನ ನೋಡದೆ ಹೋಗುವೆ ಹೆ.. ಹೆ.. ಹೆ.. ಹೀಗೆ ಏತಕೆ ಹೀ..ಗೇಕೆ ಕಾದೆ ನೀ ಮುಂಗಾರಿಗಾಗೆ ನಾ ನಿನ್ನ ಹಿಂದೆ ಸಾಗೊ ಅಲೆಮಾರಿ ಎಂತಾದರು ನನ್ನನು ನೀನೆಕೆ ಹೀಗೆ ಮರೀಚಿಕೆ ಹಾಗೆ ಕಣ್ಣಲಿದ್ದರು ಸಿಗದೆಯೇ ಕಾಡುವೆ ಕಾ..ಮನಾ.. ಬಿಲ್ಲಿನಲ್ಲೂ ಕಾಣದ ಬಣ್ಣ ನೀನೆ ಮತ್ತೆ ಸೇರದೆ ಕಾಡುವೆ ಹೆ.. ಹೆ.. ಹೆ.. ಹೀಗೆ ಏತಕೆ ಹೇಳೆ ಮೇಘವೆ ಹತ್ತಿರ.. ನನ್ನ ಜೊತೆಯಲೆ ಇರಬೇಕು ನೀನು ಎಂದು ನಾನು ಕೇಳಿಕೊಂಡೆ ಸೂರ್ಯನ ಕಿರಣ ತಾಕಿ ನೀ ಮೇಲೆಲ್ಲೋ ಬಾನಿನಲ್ಲಿ ಹೋಗಿ ಸೇರಿಕೊಂಡೆ ನೀ ದೂರವೇ ಇದ್ದರೂ ನಿನ್ನನು ನಾ ನೋಡುವೆ ಮುಚ್ಚದೆ ಕಣ್ಣನು ನೀನೇನಂದರೂ.. ನಾ ನಿನ್ನ ಬಿಟ್ಟು ಇನ್ನು ಎಲ್ಲಿ ಹೋಗುವೆ ಇಡೀ ವರ್ಷವೂ ನಾನಿಲ್ಲೇ ನಿಂತು ನಿನ್ನ ದಾರಿ ಕಾಯುವೆ ನಾ ಬಾ ಹತ್ತಿರ ಎಂದಾಗ ದೂಡುವೆ ನಾನೊಂದು ಕ್ಷಣಕು ನಿನ್ನ ಬಿಟ್ಟು ದೂರ ಹೋದರೆ ನೊಡುವೆ ಹೆ.. ಹೆ.. ಹೆ.. ಹೀಗೆ ಏತಕೆ ಹೇಳೆ ಮೆ..ಘ..ವೆ ಹಗಲಿನಲ್ಲಿ ಬಗಲಿನಲ್ಲಿ ಇದ್ದ ನಿನ್ನ ನೇಸರ ಇರುಳಿನಲ್ಲಿ ದೂರವಾದಾಗ ಮೂಡಿ ಬೇಸರ ನಿನ್ನ್ ಕಣ್ಣಿನಿಂದ ಹರಿದ ಕಂಬನಿ ನನ್ನ ಬಂದು ಸೇರಿತಾಗ ಸವಿಯ ಇಬ್ಬನಿ ನೀ ನನ್ನ ಕೈಗೆ ಎಟುಕದಿರುವ ಮಾಯಗಾತಿ ಗಗನ ಕುಸುಮ ಕಣ್ಣ ಹಾನಿಯು ಒಂದೇ ಸಾಕು ದಿನವ ಕಳೆಯಲು ಇಬ್ಬನೀ.. ತಬ್ಬಿದಾಗ ಸುರಿದು ಬಂತೂ.. ಪ್ರೀತಿ ಸೂನೆ ಕೇಳೆ ಮೇಘವೇ.. Singer: Abhay Jodhpurkar Music ...

Bhavageethe - Onde baari nanna noDi

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಮುಂದ ಮುಂದ ಹಂಗಾ ಹೋದ ಹಿಂದ ನೋಡದ ಗೆಳತಿ.. ಹಿಂದಾ ನೋಡದ.. ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ.. ಹಿಂದ ನೋಡದ.. ಹಿಂದ ನೋಡದ ಗೆಳತೀ.. ಹಿಂದಾ ನೋಡದ ಗಾಳಿ ಹೆಜ್ಜಿ ಹಿಡದ ಸುಗಂದ ಅತ್ತ ಅತ್ತ ಹೋಗು ಅಂದ ಗಾಳಿ ಹೆಜ್ಜಿ ಹಿಡದ ಸುಗಂದ ಅತ್ತ ಅತ್ತ ಹೋಗು ಅಂದ ಹೋದ ಮನಸು ಅವನ ಹಿಂದ, ಹಿಂದ ನೋಡದ ಗೆಳತೀ.. ಹಿಂದ ನೋಡದ ಹೋದ ಮನಸು ಅವನ ಹಿಂದ, ಹಿಂದ ನೋಡದ ಗೆಳತೀ.. ಹಿಂದ ನೋಡದ ಹಿಂದ ನೋಡದ ಗೆಳತೀ.. ಹಿಂದಾ ನೋಡದ ನಂದ ನನಗ ಎಚ್ಚಾರಿಲ್ಲ ಮಂದಿ ಗೊಡವಿ ಏನಾ ನನಗ ನಂದ ನನಗ ಎಚ್ಚಾರಿಲ್ಲ ಮಂದಿ ಗೊಡವಿ ಏನಾ ನನಗ ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತೀ.. ಹಿಂದ ನೋಡದ ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತೀ.. ಹಿಂದ ನೋಡದ ಹಿಂದ ನೋಡದ ಗೆಳತೀ.. ಹಿಂದಾ ನೋಡದ ಸೂಜಿ ಹಿಂದ ದಾರದಾಂಗ, ಕೊಳ್ಳದೊಳಗ ಜಾರಿದಾಂಗ ಸೂಜಿ ಹಿಂದ ದಾರದಾಂಗ, ಕೊಳ್ಳದೊಳಗ ಜಾರಿದಾಂಗ ಹೋದ ಹಿಂದ ಬಾರದಾಂಗ.. ಹಿಂದ ನೋಡದ ಗೆಳತೀ.. ಹಿಂದ ನೋಡದ ಹೋದ ಹಿಂದ ಬಾರದಾಂಗ.. ಹಿಂದ ನೋಡದ ಗೆಳತೀ.. ಹಿಂದ ನೋಡದ ಹಿಂದ ನೋಡದ ಗೆಳತೀ.. ಹಿಂದಾ ನೋಡದ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ.. ಹಿಂದ ನೋಡದ.. ಹಿಂದ ನೋಡದ ಗೆಳತೀ.. ಹಿಂದಾ ನೋಡದ

Raju Kannada Medium - Kodeyondara

ರಾಜು ಕನ್ನಡ ಮೀಡಿಯಮ್ - ಕೊಡೆಯೊಂದರ ಅಡಿಯಲ್ಲಿ ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ ಎಲೆ ಎಲೆಗಳ ಮೇಲೆಲ್ಲಾ ಹನಿಗವಿತೆಯ ಸಾಲು ಮಲೆನಾಡೆ ಹೊದ್ದಿರಲು ಬಿಳಿ ಹಿಮದ ಶಾಲು ಶೃಂಗಾರದ ಮನಸುಗಳಲಿ ಬಣ್ಣಗಳ ಕನಸು ಗಿರಿ ತುದಿಯಲಿ ರಂಗೆರಚೋ ಮಳೆಬಿಲ್ಲಿಗು ಮುನಿಸು ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ ಕಣಿವೆಯ ಇಳಿಜಾರಿನಲಿ ತಲೆದೂಗುವ ಜಾಜಿ ಜೋಗುಳ ತಾನಾಗಿರಲು ದುಂಬಿಗಳ ಜೀಜಿ ಮಿಡಿವೆದೆಗಳ ಪಿಸುಮಾತು ಕವಿಗೊಲಿಯದ ಕವನ ಮಲೆನಿಂತರು ಮುಗಿದಿಲ್ಲ ಕೊನೆಯಿಲ್ಲದ ಪಯಣ ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ

Chakravarthy - Ondu Malebillu

Chakravarthy | Ondu Malebillu  ಒಂದು ಮಳೆಬಿಲ್ಲು ಒಂದು ಮಳೆ ಮೋಡ ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ ಏನನೋ.. ಮಾತಾಡಿವೆ ಭಾವನೆ ಬಾಕಿ ಇವೆ ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ ಮೋಡ ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡು ಸಹಾ ಏನನೋ ಮಾತಾಡಿವೆ ಭಾವನೆ ಬಾಕಿ ಇವೆ ಒಂದು ಮಳೆಬಿಲ್ಲು ಒಂದು ಮಳೆ ಮೋಡ ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ ಸನ್ನಿಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ ಬೆರಳುಗಳು ಸ್ಪರ್ಶ ಬಯಸುತಿವೆ ಮನದ ಒಳಗೊಳಗೆ ಎಷ್ಟೋ ಆಸೆಗಳಿವೆ ಇಂಥಾ ಆವೇಗಾ ಈ ತವಕಾ ಸೇರೊ ಸಲುವಾಗಿ ಎಲ್ಲಾ ಅತಿಯಾಗಿ ಎಲ್ಲೂ ನೋಡಿಲ್ಲಾ ಈ ತನಕಾ ಪ್ರೀತಿಗೆ ಒಂದಹೆಜ್ಜೆ ಮುಂದಾಗಿವೆ ಏನನೂ ಮಾತಾಡಿವೆ.. ಯಾತಕೆ ಹೀಗಾಗಿವೆ ನಾಚುತಲಿವೆ ಯಾಕೊ ಕೈಯ ಬಳೆ ಮಂಚಾ ನೋಡುತಿದೆ ಬೀಳೊ ಬೆವರ ಮಳೆ ಬೆಚ್ಚಗೆ ಇದೆ ನೆತ್ತ ಉಸಿರ ಬಳೆ ದೀಪಾ ಮಲಗುತಿದೆ ನೋಡಿ ಈ ರಗಳೆ ತುಂಬಾ ಹೊಸದಾದ ಈ ಕಥನ... ಒಮ್ಮೆ ನಿಶಬ್ಧ ಒಮ್ಮೆ ಸಿಹಿಯುದ್ಧ ಎಲ್ಲೂ ಕೇಳಿಲ್ಲ ಈ ಮಿಥುನಾ ಪ್ರೀತಿಲಿ ಈ ಜೀವ ಒಂದಾಗಿವೆ ಏನನೋ ಹು ಹೂ ಹು ಹು... ಮಾತಲೇ ಮುದ್ದಾಡಿವೆ ಒಂದು ಮಳೆಬಿಲ್ಲು ಒಂದು ಮಳೆ ಮೋಡ ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ ಏನನೋ ಮಾತಾಡಿವೆ ಭಾವನೆ ಬಾಕಿ ಇವೆ