Chakravarthy - Ondu Malebillu

Chakravarthy | Ondu Malebillu

 ಒಂದು ಮಳೆಬಿಲ್ಲು ಒಂದು ಮಳೆ ಮೋಡ
ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ.. ಮಾತಾಡಿವೆ ಭಾವನೆ ಬಾಕಿ ಇವೆ

ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹಾ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆ ಮೋಡ
ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ

ಸನ್ನಿಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ

ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೆ ಎಷ್ಟೋ ಆಸೆಗಳಿವೆ

ಇಂಥಾ ಆವೇಗಾ ಈ ತವಕಾ
ಸೇರೊ ಸಲುವಾಗಿ ಎಲ್ಲಾ ಅತಿಯಾಗಿ

ಎಲ್ಲೂ ನೋಡಿಲ್ಲಾ ಈ ತನಕಾ
ಪ್ರೀತಿಗೆ ಒಂದಹೆಜ್ಜೆ ಮುಂದಾಗಿವೆ

ಏನನೂ ಮಾತಾಡಿವೆ.. ಯಾತಕೆ ಹೀಗಾಗಿವೆ

ನಾಚುತಲಿವೆ ಯಾಕೊ ಕೈಯ ಬಳೆ
ಮಂಚಾ ನೋಡುತಿದೆ ಬೀಳೊ ಬೆವರ ಮಳೆ

ಬೆಚ್ಚಗೆ ಇದೆ ನೆತ್ತ ಉಸಿರ ಬಳೆ
ದೀಪಾ ಮಲಗುತಿದೆ ನೋಡಿ ಈ ರಗಳೆ

ತುಂಬಾ ಹೊಸದಾದ ಈ ಕಥನ...
ಒಮ್ಮೆ ನಿಶಬ್ಧ ಒಮ್ಮೆ ಸಿಹಿಯುದ್ಧ

ಎಲ್ಲೂ ಕೇಳಿಲ್ಲ ಈ ಮಿಥುನಾ
ಪ್ರೀತಿಲಿ ಈ ಜೀವ ಒಂದಾಗಿವೆ

ಏನನೋ ಹು ಹೂ ಹು ಹು... ಮಾತಲೇ ಮುದ್ದಾಡಿವೆ

ಒಂದು ಮಳೆಬಿಲ್ಲು ಒಂದು ಮಳೆ ಮೋಡ
ಹೇಗೊ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ

Comments

Popular posts from this blog

Bhavageethe - Onde baari nanna noDi

ಭರತಖಂಡದ ನೀಲಗಗನವ ತಿಮಿರ ಮುಸುಗಿರಲು

ಪುಣ್ಯಕೋಟಿ ಕಥೆ