Raju Kannada Medium - Kodeyondara

ರಾಜು ಕನ್ನಡ ಮೀಡಿಯಮ್ - ಕೊಡೆಯೊಂದರ ಅಡಿಯಲ್ಲಿ


ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ

ಎಲೆ ಎಲೆಗಳ ಮೇಲೆಲ್ಲಾ ಹನಿಗವಿತೆಯ ಸಾಲು
ಮಲೆನಾಡೆ ಹೊದ್ದಿರಲು ಬಿಳಿ ಹಿಮದ ಶಾಲು

ಶೃಂಗಾರದ ಮನಸುಗಳಲಿ ಬಣ್ಣಗಳ ಕನಸು
ಗಿರಿ ತುದಿಯಲಿ ರಂಗೆರಚೋ ಮಳೆಬಿಲ್ಲಿಗು ಮುನಿಸು

ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ

ಕಣಿವೆಯ ಇಳಿಜಾರಿನಲಿ ತಲೆದೂಗುವ ಜಾಜಿ
ಜೋಗುಳ ತಾನಾಗಿರಲು ದುಂಬಿಗಳ ಜೀಜಿ
ಮಿಡಿವೆದೆಗಳ ಪಿಸುಮಾತು ಕವಿಗೊಲಿಯದ ಕವನ
ಮಲೆನಿಂತರು ಮುಗಿದಿಲ್ಲ ಕೊನೆಯಿಲ್ಲದ ಪಯಣ

ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ






Comments

Popular posts from this blog

Bhavageethe - Onde baari nanna noDi

ಭರತಖಂಡದ ನೀಲಗಗನವ ತಿಮಿರ ಮುಸುಗಿರಲು

ಪುಣ್ಯಕೋಟಿ ಕಥೆ